ಆರ್.ಮನೋಜ್ ಕುಮಾರ್ ಯಾದವ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್. ರಮೇಶ್ ನಿರ್ಮಾಣದ ರಣತಂತ್ರ ಚಿತ್ರಕ್ಕೆ ಸೆನ್ಸಾರ್ಮಂಡಳಿಯು U/ಂ ಸರ್ಟಿಫಿಕೆಟ್ ನೀಡಿದ್ದು ಇದೇ ತಿಂಗಳು ೧೮ ರಂದು ಬಿಡುಗಡೆಯಾಗಲಿರುವ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ನಿರ್ದೇಶನ- ಆದಿರಾಂ, ಛಾಯಾಗ್ರಹಣ-ರಾಜೇಶ್ ಯಾದವ್, ಸಂಗೀತ-ಎಂ.ಕಾರ್ತಿಕ್, ಸಂಕಲನ - ಉಗ್ರಂ ಶ್ರೀಕಾಂತ್, ಕಲೆ-ನಂಜುಂಡಸ್ವಾಮಿ, ಸಾಹಸ-ಮಾಸ್ ಮಾದ, ನೃತ್ಯ-ಕಲೈ-ರಾಧಿಕಾ, ಸಾಹಿತ್ಯ-ನಾಗೇಂದ್ರ ಪ್ರಸಾದ್-ಕೆ.ಕಲ್ಯಾಣ್-ಕವಿರಾಜ್, ಕೋ-ಡೈರೆಕ್ಟರ್-ಭವಾನಿಶಂಕರ್, ನಿರ್ವಹಣೆ - ಹಾರ್ಟ್ಬೀಟ್ ರಾಜು- ಮುರುಗದಾಸ್, ಕ್ಯೂಟ್ ಲವ್ & ಹಾಟ್ ಥ್ರಿಲ್ಲರ್ ಕಥಾ ಚಿತ್ರವುಳ್ಳ ಈ ಚಿತ್ರದ ತಾರಾಗಣದಲ್ಲಿ ಚಿನ್ನಾರಿ ಮುತ್ತ ವಿಜಯ್, ಹರಿಪ್ರಿಯ, ಸತ್ಯಜಿತ್, ಭಜರಂಗಿ ಮಾದು, ಸಪ್ನೊಂಕಾ ರಾಣಿ ಐಶ್ವರ್ಯ, ಕುರಿ ರಂಗ, ಶಶಿಕಲಾ, ಸೋನಂ, ಭಾರತಿ, ಶೋಬಿನಾ, ಅ೦ಜಲಿ ಮುಂತಾದವರಿದ್ದಾರೆ.
ಎಂಬಿಎ ೨೮ ರಂದು ಪ್ರಾರಂಭ
ಪಬ್ಲಿಕ್ ಪ್ರೊಡಕ್ಷನ್ಸ್ ಐಎನ್ಸಿ ಲಾಂಛನದಲ್ಲಿ ಕಥೆ, ಚಿತ್ರಕಥೆ, ನಿರ್ಮಾಣ ಮಾಡಿ ನಿರ್ದೇಶಿಸುತ್ತಿರುವ ಹೆಚ್.ಪಿ. ಇವರು ಆದರ್ಶ ಫಿಲಂ ಇನ್ಸ್ಟಿಟ್ಯೂಟ್ನಲ್ಲಿ ನಿರ್ದೆಶನದ ವಿಭಾಗದಲ್ಲಿ ಕಲಿತು, ಇತರ ನಿರ್ದೇಶಕರುಗಳ ಜೊತೆ ೬ ವರ್ಷಗಳಿಂದ ಕೆಲಸ ಮಾಡಿದ್ದಾರೆ. ಈ ಚಿತ್ರದ ಸಂಗೀತ ರಾಜಕಿಶೋರ್ರಾವ್, ಸಂಕಲನ - ಸಂಜಯ್, ನೃತ್ಯ - ಸುಧಾಕರ್ ಇದೇ ತಿಂಗಳು ೨೮ ರಿಂದ ಆರಂಭಗೊಳ್ಳಲಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು-ಮೈಸೂರು, ಮಡಿಕೇರಿ, ಮೇಲ್ಕೋಟೆ, ಹಾಗೂ ದೂದ್ಸಾಗರ್ನಲ್ಲಿ ನಡೆಯುವುದಾಗಿ ಹೇಳಿದ್ದಾರೆ. ಪ್ರಯೋಗಾತ್ಮಕ ಹಾಗೂ ಸಂಪೂರ್ಣ ಮನರಂಜನೆಯ ಚಿತ್ರವಾಗಿದ್ದು ಇದರಲ್ಲಿ ಪುನೀತ್, ಕಾವ್ಯ, ಸೋಮು, ಆನಮ್, ಪ್ರದೀಪ್ ಚಿಕ್ಕಣ್ಣ, ರವಿಶಂಕರ್, ಮುಂತಾದವರಿದ್ದಾರೆ.